ಹಸಿರು ನನ್ನ ಉಸಿರು

ಚಿತ್ರ

ಆಹಾ! ನಿಸರ್ಗವೇ, ನಿನ್ನೊಡನಿರಲು ಏನು ಆನಂದ ಎನ್ನುವ ಬಿಳಿ ಬೆಕ್ಕು

ಆಹಾ! ನಿಸರ್ಗವೇ…

ಹಸಿರಿನಲ್ಲಿ ಆನಂದಪಡುತ್ತಿರುವ ಬಿಳಿ ಬೆಕ್ಕು...

ನಿನ್ನೊಡನಿರಲು ಏನು ಆನಂದ…

ಕಾಂಕ್ರೀಟು ಕಾಡಲ್ಲಿ ಒಂಥರಾ ಬೇಜಾರು ಎನ್ನುವ ಬಿಳಿ ಬೆಕ್ಕು

ಕಾಂಕ್ರೀಟು ಕಾಡಲ್ಲಿ… ಒಂಥರಾ ಬೇಜಾರು…

ನಿಜ, ಇವತ್ತು ವಿಶ್ವ ಪರಿಸರ ದಿನವಲ್ಲ. ಆದರೆ, ನಮ್ಮನ್ನು ದಿನವೂ ಪೋಷಿಸಿ, ಕಾಪಾಡುವ ನಿಸರ್ಗಕ್ಕೆ ಕೇವಲ ಒಂದು ದಿನ ಮೀಸಲೆ? ಬನ್ನಿ, ನಮ್ಮ ನಿಸರ್ಗ, ನಮ್ಮ ಪರಿಸರ, ನಮ್ಮ ಹಸಿರನ್ನು ನಮ್ಮ ಉಸಿರಿರುವರೆಗೂ ಕಾಪಾಡೋಣ…
ಹಸಿರೇ ನಮ್ಮ ಉಸಿರು.

– ಪ್ರಚಿತ್ರ

©Copyright Pradeep Features. All rights reserved.

ಮಳೆಗಾಲದಲ್ಲಿ ಲಂಬ ಪುಷ್ಪ

ಚಿತ್ರ

ಈ ವರ್ಷ ಮಳೆ ಬಂದಿದ್ದು ತೀರಾ ಕಮ್ಮಿ. ಆದರೆ, ವರ್ಷಧಾರೆಯೀಗ ಮತ್ತೆ ಹೊಯ್ಯುತ್ತಿದೆ…

ಲಂಬ ಪುಷ್ಪ

ಮತ್ತೆ ಹೊಯ್ದ ಮಳೆಯ ಬಳಿಕ ಸಂತಸಗೊಂಡಿರುವ ಲಂಬ ಪುಷ್ಪ

ಮಳೆಯ

. ಲಂಬ ಪುಷ್ಪದೊಳಗೆ ಅವಿತು ಕುಳಿತಿರುವ ಕಪ್ಪೆ ಮರಿಗಳು..

ಲಂಬ ಪುಷ್ಪ – ಅಲ್ಲಮಂಡ ಕಥರ್ಟಿಕ (Allamanda cathartica) ಅಥವಾ ಗೋಲ್ಡನ್ ಟ್ರಂಫೆಟ್ (Golden Trumpet) ಹಾಗೂ ಯೆಲ್ಲೊ ಬೆಲ್ (Yellow Bell) ಎಂದೂ ಲಂಬ ಪುಷ್ಪವನ್ನು ಅಥವಾ ಆ ಗಿಡವನ್ನು ಕರೆಯಲಾಗುತ್ತದೆ. ಇದರ ಹಳದಿ ಹೂವು ಸುಮಾರು ೫ ರಿಂದ ೭.೫ ಸೆಂಟಿಮೀಟರ್ ಅಗಲವಿರುತ್ತವೆ. ಇದರ ಇತರ ಬಗೆಯ ತಳಿಗಳಲ್ಲಿ ಬಿಳಿ, ನೇರಳೆ, ಗುಲಾಬಿ ಅಥವಾ ಕೇಸರಿ ಬಣ್ಣಗಳ ಹೂವುಗಳೂ ಇರುತ್ತವೆ. ಬಿಸಿಲು, ಮಳೆ ಹೆಚ್ಚಿದ್ದು, ತೇವಾಂಶವಿರುವ ಕಡೆ ಇವು ಬೆಳೆಯುತ್ತವೆ. ಮುಂದಿನ ಸಲ ಇನ್ನಷ್ಟು ಚಿತ್ರಗಳೊಂದಿಗೆ ಭೇಟಿಯಾಗೋಣ.

– ಪ್ರಚಿತ್ರ

ವಿಶೇಷ: ಹಳದಿ ಲಂಬ ಪುಷ್ಪದ ಪರ್ಸೋನಾ

– ನೀವು ಫ಼ೈರ್ ಫ಼ಾಕ್ಸ್ ಬ್ರೌಸರ್ ಉಪಯೋಗಿಸುವಿರಾ? ಹಾಗಿದ್ದಲ್ಲಿ, ನಿಮಗಾಗಿ ಒಂದು ಪರ್ಸೋನಾ
!

©Copyright Pradeep Features. All rights reserved.

References and Further Reading:
[1] Allamanda From Wikipedia, the free encyclopedia
[2] Allamanda cathartica From Wikipedia, the free encyclopedia